ದಾವಣಗೆರೆ, ನ.30- ನಗರದ ದೊಡ್ಡಪೇಟೆಯ ಶ್ರೀ ವಿಠಲ ಮಂದಿರದಲ್ಲಿ ನಾಮದೇವ ಸಿಂಪಿ ಸಮಾಜದ ದೈವ ಮಂಡಳಿಯಿಂದ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವ ಇಂದು ಜರುಗಿತು. ಪುಷ್ಪಾಲಂಕೃತ ಮಯೂರ ರಥದಲ್ಲಿ ಶ್ರೀ ವಿಠ್ಠಲ ರುಖುಮಾಯಿ ಉತ್ಸವ ಮೂರ್ತಿಯೊಂದಿಗೆ ಭಜನೆ, ಕುಂಭೋತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಮಾಜಿ ಮಹಾಪೌರರೂ ಆದ ನಾಮದೇವ ಸಿಂಪಿ ಸಮಾಜ ದೈವ ಮಂಡಳಿಯ ಅಧ್ಯಕ್ಷ ಎಂ.ಎಸ್. ವಿಠಲ್ ಮಹೇಂದ್ರಕರ್ ಮತ್ತು ಗೌರವಾಧ್ಯಕ್ಷ ಜ್ಞಾನದೇವ ಬೊಂಗಾಳೆ ಅವರುಗಳ ನೇತೃತ್ವದಲ್ಲಿ ನಡೆದ ಈ ಉತ್ಸವದಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.