ಹರಿಹರ, ಆ.17- ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಹರಿಹರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಮಂಗಳವಾರ ಗಂಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಯಿತು. ಸಮಿತಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಉಪಾಧ್ಯಕ್ಷ ಕೊಕ್ಕನೂರಿನ ಬಸವರಾಜ್, ಸದಸ್ಯರಾದ ಬೆಳ್ಳೂಡಿ ನರೇಂದ್ರ, ಜಿಗಳಿಯ ಶ್ರೀಮತಿ ಈರಮ್ಮ ರುದ್ರಗೌಡ, ಗುತ್ತೂರಿನ ಮಂಜಪ್ಪ ಮತ್ತು ಸಿಬ್ಬಂದಿ ವರ್ಗದವರು ಈ ವೇಳೆ ಹಾಜರಿದ್ದರು.
February 24, 2025