ದಾವಣಗೆರೆ, ನ.18- ನಗರದ ಯುನೈಟೆಡ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಶಾಲೆಯ ಅಧ್ಯಕ್ಷ ಬಿ. ದಾದಾಪೀರ್ ತಮ್ಮ ಭಾಷಣದಲ್ಲಿ ಕನ್ನಡ ನಾಡು, ನುಡಿ ಕುರಿತು ಮಾತನಾಡಿದರು. ಶಿಕ್ಷಕಿ ಜಿ. ಜ್ಯೋತಿ ಒನಕೆ ಓಬವ್ವ ಕುರಿತು ಮಾತನಾಡಿದರು. ವಿದ್ಯಾರ್ಥಿನಿಯರಾದ ಬಿ.ಬಿ. ಸಕೀನಾ ಕುವೆಂಪು ಕುರಿತು ಮಾತನಾಡಿದಳು. ಜುಹಾ ನಿತ್ಯೋತ್ಸವ ಗೀತೆ ಹಾಡಿದರು. ನೂರ್ ಮದನಿ ಕಿತ್ತೂರು ರಾಣಿ ಚೆನ್ನಮ್ಮ ವೇಶ ಧರಿಸಿ ಮಾತನಾಡಿದಳು. ವಿದ್ಯಾರ್ಥಿ ಆದಿ ಶಾರೀಕ್ ಖಾನ್ ಪುನೀತ್ ರಾಜಕುಮಾರ್ ಪಾತ್ರಾಭಿನಯ ಮಾಡಿದರು.
ಶಾಲೆಯ ನಿರ್ದೇಶಕರಾದ ಫಸೀಹಾ ಬಾನು ಖಾನ್, ಪ್ರಾಂಶುಪಾಲ ಎಂ. ವಾಸೀಂ ಪಾಷ ಕಾರ್ಯಕ್ರಮ ಕುರಿತು ಮಾತನಾಡಿದರು. ಟ್ರಸ್ಟಿ ಫಿರ್ದೋಸ್ ಸಿದ್ಧಿಕಿ, ನಿರ್ವಾಹಕ ಶಾರೀಖ್ ಖಾನ್, ಪ್ರಾಂಶುಪಾಲ ಎಂ. ವಾಸೀಮ್ ಪಾಷಾ, ಸಂಯೋಜಕರಾದ ಶರಫುನ್ನೀಸಾ ಮತ್ತು ಇತರರು ಉಪಸ್ಥಿತರಿದ್ದರು.