ನಂದಿಗುಡಿ : ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್

ಮಲೇಬೆನ್ನೂರು, ಮಾ.29- ಎರಡನೇ ಹಂತದ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಂದಿಗುಡಿ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ 247 ವಿದ್ಯಾರ್ಥಿಗಳಿಗೆ, 9 ಜನ ಶಿಕ್ಷಕರಿಗೆ ಇಬ್ಬರು ಬೋಧಕೇತರರಿಗೆ, 11 ಜನ ಅಡುಗೆ ಸಿಬ್ಬಂದಿಗಳಿಗೆ  ಶನಿವಾರ ಕೊರೊನಾ ಟೆಸ್ಟ್‍ ಮಾಡಲಾಯಿತು. ಇದಲ್ಲದೆ ಹರಿಹರ ತಾಲ್ಲೂಕಿನ ಪ್ರತಿಯೊಂದು ಶಾಲಾ- ಕಾಲೇಜು, ಹೋಟೆಲ್, ಡಾಬಾ, ಅಂಗಡಿ ಮಾಲ್‍ಗಳಲ್ಲಿ ಕೊರೊನಾ ಟೆಸ್ಟ್‍ ಮಾಡಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. 

ಆ ಪ್ರಕಾರ ಹಂತ ಹಂತವಾಗಿ ಟೆಸ್ಟ್‍ಗಳನ್ನು ಹೆಚ್ಚಿಸಲಾಗುವು ದೆಂದು ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಮಂಜಪ್ಪ, ಆಶಾ, ಸ್ಟಾಫ್‍ ನರ್ಸ್‍, ಮಂಜುನಾಥ ಅಗಡಿ, ಮುಕ್ಸುದ್‍ ಅಹ್ಮದ್‍, ಪ್ರಯೋಗ ಶಾಲಾ ತಂತ್ರಜ್ಞರಾದ ಆಂಜನೇಯ, ಶಫೀವುಲ್ಲಾ, ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ತೋಸಿಕ್‍ವುಲ್ಲಾ, ನವೀನ್‍ ಹಾಜರಿದ್ದರು.

error: Content is protected !!