ದಾವಣಗೆರೆ, ಮಾ.27 – ಮಹಾನಗರ ಪಾಲಿಕೆ ದಾವಣಗೆರೆ ಇವರ ವತಿಯಿಂದ 2020-21ರ ಸ್ವಚ್ಛತಾ ದೃಷ್ಟಿಯಿಂದ ಎಲ್ಲ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸರ್ಕಾರಿ ಜಾಗದ ರಸ್ತೆಯ ಬದಿಯಲ್ಲಿರುವ ಗೋಡೆಗಳ ಮೇಲೆ ಚಿತ್ರಕಲೆ ಬರೆಯುವ ಮೂಲಕ ಚಾಲನೆ ನೀಡಲಾಯಿತು.
ಮೇಯರ್ ಎಸ್. ಟಿ ವೀರೇಶ್, ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ , ಸ್ಥಾಯಿ ಸಮಿತಿ ಅಧ್ಯಕ್ಷರು ಉಮಾಪ್ರಕಾಶ್ ಹಾಗೂ ಡಾ|| ಸಂತೋಷ್, ಬಿಜೆಪಿ ಮುಖಂಡರಾದ ಯಶೋಧ ಹೆಗ್ಗಪ್ಪ, ಪ್ರಕಾಶ್ ಗೋಡೆಗೆ ಬರಹ ಮಾಡುವ ಮೂಲಕ ಚಾಲನೆ ನೀಡಿದರು.