ಹೂವಿನಹಡಗಲಿ, ಮಾ.27- ಕೃಷಿ ಭೂ ಸ್ವಾಧೀನ ಕಾಯ್ದೆ ರದ್ಧತಿ, ಗ್ಯಾಸ್ ಸಿಲಿಂ ಡರ್ ಬೆಲೆ ಹಾಗೂ ಪೆಟ್ರೋಲ್, ಡೀಸೆಲ್ ಹಾಗೂ ದಿನನಿತ್ಯ ವಸ್ತುಗಳ ಬೆಲೆಯನ್ನು ಇಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘದ ತಾಲ್ಲೂಕು ಘಟಕ ಪ್ರತಿಭಟನೆ ನಡೆಸಿತು.
ದೆಹಲಿಯಲ್ಲಿ ಕಾಯ್ದೆ ರದ್ದುಪಡಿಸುವಂತೆ 4 ತಿಂಗಳಿಂದ ಪ್ರತಿಭಟನೆ ಮಾಡಿದರೂ ಪ್ರಧಾನಿಗಳು ರೈತರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಹಾಗೂ ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಕೂಡಲೇ ಕಾಯ್ದೆ ರದ್ದುಪಡಿಸಬೇಕು ಹಾಗೂ ಬೆಲೆಗಳನ್ನು ಇಳಿಸಬೇಕು. ಇಲ್ಲವಾದಲ್ಲಿ ರಾಜೀನಾಮೆ ಕೊಡಬೇಕೆಂದು ಸಂಘವು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಜೆ.ಎಂ. ರವಿಸ್ವಾಮಿ, ಜಿಲ್ಲಾಧ್ಯಕ್ಷ ಸೋಮಶೇಖರ್, ಪ್ರಧಾನಕಾರ್ಯದರ್ಶಿ ಎಂ. ಗಂಗಾಧರ್, ಸದಸ್ಯರಾದ ಬಿ. ಶಿವಪ್ಪ, ಸಿದ್ದಪ್ಪ, ಪುರುಷೋತ್ತಮ್, ಹೆಚ್. ದಿಳ್ಳೆಪ್ಪ ಇನ್ನಿತರರಿದ್ದರು.