ನಂದಗೋಕುಲ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ತಪಾಸಣೆ

ದಾವಣಗೆರೆ, ಮಾ.28 – ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಿಂದ ನಗರದ ಶ್ರೀ ಮಾತಾ ವಿದ್ಯಾಸಂಸ್ಥೆ, ನಂದಗೋಕುಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 210 ವಿದ್ಯಾರ್ಥಿಗಳಿಗೆ  ಕೋವಿಡ್-19 ತಪಾಸಣಾ ಶಿಬಿರವನ್ನು ನಡೆಸಲಾಯಿತು. 

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಡಿ. ನಾಗರಾಜ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ. ಪಿ ಗಾಯತ್ರಿ, ನೋಡಲ್ ಅಧಿಕಾರಿ ಹೆಚ್. ವಿ. ಶ್ರೀನಿವಾಸ್, ಶಾಲಾ ಕಾರ್ಯದರ್ಶಿ ಶ್ರೀಮತಿ ಅನಸೂಯ.ಬಿ , ಮುಖ್ಯ ಶಿಕ್ಷಕರಾದ ಶ್ರೀಮತಿ ರೆಹಾನಾ ಬಾನು ನಾಸಿಕ ಹಾಗೂ ಮಲ್ಲಿಕಾರ್ಜುನ, ಶಿಕ್ಷಕಿ ಶ್ರೀಮತಿ ಕಸ್ತೂರಿ, ವ್ಯವಸ್ಥಾಪಕಿ ಶ್ರೀಮತಿ ರೇಣುಕಾ ಹಾಜರಿದ್ದರು.

error: Content is protected !!