ಹರಿಹರದಲ್ಲಿ ಸಂಭ್ರಮದ ಕಾಮದಹನ

ಹರಿಹರ, ಮಾ.28- ನಗರದಲ್ಲಿ ಕಾಮದಹನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ನಗರದ ನಡವಲಪೇಟೆ ಯುವಕ ಸಂಘದಿಂದ ರತಿ ಮನ್ಮಥ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿ ನಂತರದಲ್ಲಿ ಕಾಮದಹನ ಮಾಡಲಾಯಿತು.

ಹಾಗ` ನಗರದ ಹೊಸ ಭರಂಪುರ, ಹವಳದ ಬೀದಿ, ಹೈಸ್ಕೂಲ್ ಬಡಾವಣೆ, ಕೋಟೆ ಬಡಾವಣೆ, ದೇವಸ್ಥಾನ ರಸ್ತೆ, ವಿಜಯನಗರ ಬಡಾವಣೆ, ಹರ್ಲಾಪುರ ಬಡಾವಣೆ, ಹಳ್ಳದಕೇರಿ ಬಡಾವಣೆ, ಕೈಲಾಸನಗರ, ಕಾಳಿದಾಸ ನಗರ, ಟಿಪ್ಪುನಗರ, ಎ.ಕೆ. ಕಾಲೊನಿ, ವಾಗೀಶ್ ನಗರ,  ದೊಡ್ಡಿಬೀದಿ, ವಿದ್ಯಾನಗರ, ಗಾಂಧಿನಗರ ಮುಂತಾದ ಬಡಾವಣೆಗಳಲ್ಲಿ ರತಿ ಮನ್ಮಥ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ, ದುರ್ಗುಣಗಳನ್ನು ಸುಡುವ ಸಂಕೇತವಾಗಿ ತಡರಾತ್ರಿ ಯುವಕರು  ಬೊಬ್ಬೆ ಹಾಕಿ, ಶಿಳ್ಳೆ ಹೊಡೆದು, ಬಾಯಿ ಬಾಯಿ ಬಡಿದುಕೊಂಡು ಹಲಗೆ ಭಾರಿಸುವ ಮೂಲಕ ಮನೆ ಮನೆಗೆ ಹೋಗಿ ಶೇಖರಿಸಿದ ಕುಳ್ಳು, ಕಟ್ಟಿಗೆಗಳಿಂದ ಕಾಮದಹನ ನಡೆಸಿದರು. 

ಬೆಳಿಗ್ಗೆ 7 ಗಂಟೆಗೆ ಯುವಕರು ಪರಸ್ಪರ ಬಣ್ಣವನ್ನು ಎರಚುವ ಮೂಲಕ ರಂಗುರಂಗಿನ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು. 

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್, ನಗರಸಭೆ ಸದಸ್ಯರಾದ ಲಕ್ಷ್ಮಿ ದುರುಗೋಜಿ ಮೋಹನ್, ಸಿದ್ದೇಶ್, ಮುಖಂಡರಾದ ಮಹೇಂದ್ರಕರ್ ಜಗದೀಶ್, ರಾಕೇಶ್, ಚಂದನ್ ಮೂರ್ಕಲ್, ರಾಘವೇಂದ್ರ,     

error: Content is protected !!