ದಾವಣಗೆರೆ, ಮಾ.28- ರಸ್ತೆ ಅಪಘಾತವಾಗಿ ನರಳಾಡುತ್ತಿದ್ದ ಬೈಕ್ ಸವಾರನಿಗೆ ಚಿಕಿತ್ಸೆ ಕೊಡಿಸಿ ಬದುಕುಳಿಸಲು ನೆರವಾಗುವ ಮುಖೇನ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಾನವೀಯತೆ ಮೆರೆದಿದ್ದಾರೆ.
ತಾಲ್ಲೂಕಿನ ದೇವರಹಳ್ಳಿ ಗ್ರಾಮದ ಬಳಿ ಹರಪನಹಳ್ಳಿ ಮೂಲದ ಬೈಕ್ ಸವಾರನಿಗೆ ಅಪಘಾತವಾಗಿ ರಸ್ತೆ ಬದಿ ನರಳಾಡುತ್ತಿದ್ದ. ಅದೇ ಮಾರ್ಗ ದಲ್ಲಿ ಸಾಗುತ್ತಿದ್ದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಇದನ್ನು ಗಮನಿಸಿ ಕಾರಿನಿಂದ ಇಳಿದು ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ದಾವಣಗೆರೆ ಜಿಲ್ಲಾಸ್ಪತ್ರೆಗೆ 108 ಅಂಬ್ಯುಲೆನ್ಸ್ ಮುಖಾಂತರ ಕಳುಹಿಸಿದರು.