ದಾವಣಗೆರೆ, ಮಾ.28 – ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಘವು ಇತ್ತೀಚೆಗೆ ಶ್ರೀ ತರಳಬಾಳು ವಸತಿ ಶಾಲೆಯ ಆವರಣದಲ್ಲಿ ತೃತೀಯ ಸೋಪಾನ ಪರೀಕ್ಷಾ ಶಿಬಿರವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ದಿನೇಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ರತ್ನ.ಎಂ ಪರೀಕ್ಷಾ ಶಿಬಿರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ಪರೀಕ್ಷಾ ಶಿಬಿರದಲ್ಲಿ 70 ಸ್ಕೌಟ್ಸ್ ಮತ್ತು 53 ಗೈಡ್ಸ್ ಭಾಗವಹಿಸಿದ್ದರು.
ಡಿ. ಹಾಲಪ್ಪ ಮತ್ತು ಶ್ರೀಮತಿ ಕಲ್ಲಮ್ಮ ಶಿಬಿರದ ನಾಯಕರಾಗಿ ಕೆಲಸ ಮಾಡಿದರು. ಸಿದ್ಧೇಶ್, ವಿಜಯ್, ಶರತ್, ಶ್ರೀಮತಿ ನಯನ, ಯೇಸುಪ್ರಿಯಾ, ಶ್ರೀಮತಿ ರಜಿನಿ, ಶ್ರೀಮತಿ ಸುಜಾತ ಸಹಾಯಕ ನಾಯಕರಾಗಿ ಕೆಲಸ ಮಾಡಿದರು. ರವೀಂದ್ರಸ್ವಾಮಿ. ಟಿ.ಎಂ ಕಾರ್ಯದರ್ಶಿ ಸ್ಥಳೀಯ ಸಂಘವು ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು.