ಮಲೇಬೆನ್ನೂರು, ಮಾ.28 – ಜಿಗಳಿ ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿ ರಥೋತ್ಸವದ ಅಂಗವಾಗಿ ಭಾನುವಾರ ಸಂಜೆ ದೇವರುಗಳ ಸಮ್ಮುಖದಲ್ಲಿ ಭೂತ ಸೇವೆ ನಡೆಯಿತು.
ಮುದ್ರೆ ಹಾಕಿಸಿಕೊಂಡಿರುವ ದಾಸಪ್ಪರು ಭೂತ ಸೇವೆಯಲ್ಲಿ ಭಾಗವಹಿಸಿ, ಸಾಮೂಹಿಕವಾಗಿ ಎಡೆ ಮಾಡುವ ಬಾಳೆಹಣ್ಣು, ಬೆಲ್ಲ, ಈರುಳ್ಳಿ ಪ್ರಸಾದವನ್ನು ನೆಲದ ಮೇಲೆ ಬಿದ್ದು ಸೇವನೆ ಮಾಡಿದರು. ನಂತರ ಗ್ರಾಮದ ರಾಜ ಬೀದಿಗಳಲ್ಲಿ ಶ್ರೀ ರಂಗನಾಥ ಸ್ವಾಮಿ, ಶ್ರೀ ಬೀರಲಿಂಗೇಶ್ವರ ಮತ್ತು ಬೇವಿನಹಳ್ಳಿ ಆಂಜನೇಯ ಸ್ವಾಮಿ ದೇವರ ಉತ್ಸವ ವಿಜೃಂಭಣೆಯಿಂದ ಜರುಗಿತು.
ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ಶ್ರೀ ರಂಗನಾಥ ಸ್ವಾಮಿಗೆ ನೋಟಿನ ಹಾರ ಹಾಕಿ ಭಕ್ತಿ ಸಮರ್ಪಿಸಿದರು.