ಹೂವಿನಹಡಗಲಿ, ಮಾ.28 – ಇಲ್ಲಿನ ಜಂಗಮ ಕ್ಷೇಮಾಭಿವೃದ್ಧಿ ಸಂಘ ಪ್ರಥಮ ಬಾರಿಗೆ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಸಾನ್ನಿಧ್ಯ ವಹಿಸಿದ್ದ ಮಾನಿಹಳ್ಳಿ ಶ್ರೀ ಮಳೆಯೋಗೀಶ್ವರ ಸ್ವಾಮೀಜಿ ಮಾತನಾಡಿ, ರೇಣುಕಾಚಾರ್ಯರು ಸಾರಿದ ಸಂದೇಶಗಳು ಪ್ರತಿಯೊಬ್ಬರ ಮನೆ-ಮನದಲ್ಲಿ ನೆಲೆಯೂರಬೇಕು ಎಂದರು.
ವಚನ ಸಾಹಿತ್ಯಕ್ಕೆ ಸಿಕ್ಕ ಮನ್ನಣೆ ವೀರಶೈವ ಧರ್ಮ ಗ್ರಂಥ ಸಿದ್ದಾಂತ ಶಿಖಾಮಣಿಗೆ ಸಿಗದಿರುವುದು ವಿಷಾದದ ಸಂಗತಿ ಎಂದು ಹೇಳಿದರು ಲಿಂಗನಾಯಕನಹಳ್ಳಿಯ ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಶಿವಶಾಂತವೀರ ಕುಲಕರ್ಣಿ ಮಾತನಾಡಿದರು. ಉತ್ತಂಗಿಯ ಶ್ರೀ ಸೋಮಶೇಖರ ಸ್ವಾಮೀಜಿ, ಅಭಿನವ ಆಲೂರು ಶ್ರೀ ಸಣ್ಣ ಹಾಲವೀರಪ್ಪಜ್ಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಿಲ್ಪಿ ಜಿ.ಬಿ. ಹಂಸಾನಂದಾಚಾರ್ಯ, ಕಲಾವಿದ ಎ.ಎ. ಹಾಲಯ್ಯ ಹಾಗೂ ಜಾನಪದ ವಿದ್ವಾಂಸರಾದ ಚಂದ್ರಶೇಖರಶಾಸ್ತ್ರಿ ಅವರನ್ನು ಗೌರವಿಸಲಾಯಿತು.