ದಾವಣಗೆರೆ, ಮಾ. 26 – ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಿಂದ ನಗರದ ಅಕ್ಕಮಹಾದೇವಿ ಬಾಲಿಕಾ ಮತ್ತು ಗುರುಬಸಮ್ಮ ವಿ. ಚಿಗಟೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 480 ವಿದ್ಯಾರ್ಥಿಗಳಿಗೆ 19ನೇ ಕೋವಿಡ್ ತಪಾಸಣಾ ಶಿಬಿರವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಡಿ. ನಾಗರಾಜ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ಗಾಯತ್ರಿ, ನೋಡಲ್ ಅಧಿಕಾರಿ ಹೆಚ್. ವಿ. ಶ್ರೀನಿವಾಸ್, ಮುಖ್ಯ ಶಿಕ್ಷಕ ಹೆಚ್. ನಿಂಗಪ್ಪ, ದೈಹಿಕ ಶಿಕ್ಷಕಿ ಶ್ರೀಮತಿ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.