ದಾವಣಗೆರೆ, ಮಾ. 26 – ಕುಕ್ಕುವಾಡದ ಶ್ರೀ ಆಂಜನೇಯ ಸೌಹಾರ್ದ ಸಹಕಾರಿ ನಿಯಮಿತ ಇದರ ನೂತನ 5ನೇ ಶಾಖೆಯನ್ನು ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದಲ್ಲಿ ಹಾಗೂ ಹೊನ್ನಾಳಿಯಲ್ಲಿ 6ನೇ ಶಾಖೆಯನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ತಿಳವಳ್ಳಿ ಗ್ರಾಮದಲ್ಲಿ ಈಚೆಗೆ ನಡೆದ ನೂತನ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ರುದ್ರಗೌಡ್ರು, ಆಡಳಿತ ಮಂಡಳಿಯ ಸದಸ್ಯರಾದ ಬಿ.ಹೆಚ್.ಶಿವನಗೌಡ್ರು, ಕೆ.ಶರಣಪ್ಪ, ಕೆ.ಟಿ.ಚಂದ್ರಶೇಖರಪ್ಪ, ಟಿ.ಎಂ.ಕರಿಬಸಪ್ಪ, ಪಿ.ಎನ್.ಮಹೇಂದ್ರ, ಕೊಪ್ಪದ್ ಹಾಗೂ ಚಿಕ್ಕಬಾಸೂರು ಮಲ್ಲಿಕಾರ್ಜುನಗೌಡ್ರು ಅತಿಥಿಗಳಾಗಿ ಭಾಗವಹಿಸಿದ್ದರು.
ಹೊನ್ನಾಳಿಯ ಸಂತೇ ಮೈದಾನದ ಎದುರಿನ ಬಿಲ್ಡಿಂಗ್ನಲ್ಲಿ ಈಚೆಗೆ ನಡೆದ ನೂತನ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಹಕಾರಿಯ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.