ದಾವಣಗೆರೆ, ಮಾ.26- ಮಹಾನಗರ ಪಾಲಿಕೆ ಸಾರ್ವಜನಿಕ, ಆರೋಗ್ಯ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಲ್.ಡಿ. ಗೋಣಪ್ಪ ಅವರು ನಿನ್ನೆ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮಕ್ಕೆ ಆಗಮಿ ಸಿದ್ದ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಯಶವಂತರಾವ್ ಜಾಧವ್ ಅವರನ್ನು ಗೋಣಪ್ಪ ಅವರು ಸನ್ಮಾನಿಸಿದರು. ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್, ಆಶ್ರಯ ಮಾಜಿ ಸದಸ್ಯರಾದ ಆನಂದ ಹಿರೇಮಠ, ಡಿ. ಹನುಮಂತಪ್ಪ, ಜಿ. ಪ್ರಕಾಶ್, ಪರಶುರಾಮ್ ಮತ್ತಿತರರಿದ್ದರು.
January 7, 2025