ವಿಜೃಂಭಣೆಯ ಉರ್ಲುಕಟ್ಟೆ ಬಸವೇಶ್ವರ ಸ್ವಾಮಿ ತೇರು

 ಜಗಳೂರು, ಮಾ.25- ತಾಲ್ಲೂಕಿನ ಉರ್ಲುಕಟ್ಟೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ಮಹಾರಥೋ ತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಭಕ್ತರು ರಥೋತ್ಸವದ ಗಾಲಿಗೆ ಕಾಯಿ ಒಡೆದು, ಕಳಸ ಹಾಗೂ ರಥೋತ್ಸವಕ್ಕೆ ಬಾಳೆ ಹಣ್ಣು ಎಸೆಯುತ್ತಿದ್ದಂತೆ ಶ್ರೀ ಬಸವೇಶ್ವರ ಸ್ವಾಮಿಯ ಘೋಷಣೆಯೊಂದಿಗೆ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಇದೇ ವೇಳೆ ಉರ್ಲುಕಟ್ಟೆ ಗ್ರಾಮದ ಶಾಂತವೀರಸ್ವಾಮಿ ಅವರು  1.15 ಲಕ್ಷ ರೂ. ಗಳಿಗೆ ಶ್ರೀ ಬಸವೇಶ್ವರ ಸ್ವಾಮಿಯ ಬಾವುಟವನ್ನು ಹರಾಜಿನಲ್ಲಿ ಪಡೆದುಕೊಂಡರು.

ಗ್ರಾಮದ ಗುಡ್ಡದ ಮೇಲೆ ಉದ್ಭವವಾಗಿರುವ ಬಸವಣ್ಣನ ಮೂರ್ತಿಗೆ ಅಪಾರ ಭಕ್ತರು  ಪೂಜೆ ಸಲ್ಲಿಸಿ ದರು. ಈ ಸಂದರ್ಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ದಿದ್ದಿಗಿ
ಗ್ರಾ.ಪಂ ಅಧ್ಯಕ್ಷರು, ಸದಸ್ಯರುಗಳು, ಚುನಾಯಿತ ಪ್ರತಿನಿಧಿಗಳು, ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು  ಹಾಗೂ ಮುಖಂಡರು ಉಪಸ್ಥಿತರಿದ್ದರು.

error: Content is protected !!