ಕೂಡ್ಲಿಗಿ, ಮಾ.25- ತಾಲ್ಲೂಕು ಆರೋಗ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಮೈರಾಡ ಟಿ.ಬಿ. ರೀಚ್ ಸಂಸ್ಥೆ, ಆರೋಹಣ ಸೊಸೈಟಿ ಫಾರ್ ಸೋಷಿಯಲ್ ಡೆವಲಪ್‌ಮೆಂಟ್ ಸಂಸ್ಥೆ, ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆ, ವಿಮುಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ, ಶ್ರೀ ರಾಘವೇಂದ್ರ ಪ್ಯಾರಾ ಮೆಡಿಕಲ್ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಆಚರಿಸಲಾಯಿತು.
ಉದ್ಘಾಟಕರಾಗಿ ಆಗಮಿಸಿದ್ದ ತಹಶೀಲ್ದಾರ್ ಮಹಾಬಲೇಶ್ವರ್ ಆಗಮಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಜಾಥಾಗೆ ಚಾಲನೆ ನೀಡಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಬಿ. ಷಣ್ಮುಖ ನಾಯ್ಕ, ತಾಲ್ಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ವಿನಯ್ ಮುದೇಗೌಡರು, ಮೂಳೆ ತಜ್ಞ ಡಾ. ರವಿ ಕುಮಾರ್, ಮಕ್ಕಳ ತಜ್ಞರಾದ ಡಾ. ಐಶ್ವರ್ಯ, ಡಾ. ರೇಖಾ, ಫಾರ್ಮಸಿ ಅಧಿಕಾರಿ ಈಶಪ್ಪ, ಶುಶ್ರೂಷಾಧಿಕಾರಿ ರಾಮಾಂಜನಯ್ಯ, ತಂತ್ರಜ್ಞರಾದ ಅಂಗಡಿ ಮಹಾಂತೇಶ, ಗುರು ಬಸವರಾಜ, ತಾಲ್ಲೂಕು ಹಿರಿಯ ಮೇಲ್ವಿಚಾರಕರಾದ ಚಿದಾನಂದ, ದೇವಿಕುಮಾರಿ ಇನ್ನಿತರರಿದ್ದರು.
ಮೈರಾಡ ಟಿ.ಬಿ. ರೀಚ್ ಸಂಸ್ಥೆ ವತಿಯಿಂದ ಟಿಬಿ ವಾರಿಯರ್ಸ್‌ಗಳಾದ ರಾಜಕುಮಾರ್, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ರಾಜಕುಮಾರ್, ಪ್ರ.ಶಾ. ತಂತ್ರಜ್ಞೆ ಭಾಗ್ಯಮ್ಮ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಪ್ರಾರಂಭದಲ್ಲಿ ಜಾಥಾ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಿಂದ ವೀರ ಮದಕರಿ ನಾಯಕ ವೃತ್ತದವರೆಗೆ ಸಾಗಿ ಘೋಷಣೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.