ದಾವಣಗೆರೆ, ಮಾ.25 – ಶಾಮನೂರಿನಲ್ಲಿ ನಿನ್ನೆ ಸರಳವಾಗಿ ನಡೆದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರು ಪೂಜೆ ಸಲ್ಲಿಸಿದರು. ದೇವಸ್ಥಾನ ಸಮಿತಿಯವರು, ಮಾಜಿ ಛೇರ್ಮನ್ ರಾಮಚಂದ್ರಪ್ಪ, ಪಾಲಿಕೆ ಸದಸ್ಯ ಕಲ್ಲಳ್ಳಿ ನಾಗರಾಜ್ ಎಸ್ಸೆಸ್ ಅವರನ್ನು ಸ್ವಾಗತಿಸಿ ಸನ್ಮಾನಿಸಿದರು. ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಈಶ್ವರ ದೇವಸ್ಥಾನಕ್ಕೂ ತೆರಳಿ ಎಸ್ಸೆಸ್ ಪೂಜೆ ಸಲ್ಲಿಸಿದರು.
December 26, 2024