ರಾಣೇಬೆನ್ನೂರು, ಆ.5- ತಾಲ್ಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಪಂಚಮಿ ಹಬ್ಬದ ಅಂಗವಾಗಿ ನಾಳೆ ದಿನಾಂಕ 6 ರಿಂದ 10 ರವರೆಗೆ ನಡೆಯಬೇಕಾಗಿದ್ದ ಬೀರೇಶ್ವರ ದೇವರ ಜಾತ್ರೆಯನ್ನು ಕೋವಿಡ್ ಮೂರನೇ ಅಲೆ ವ್ಯಾಪಕವಾಗಿ ಹರಡುವ ಭೀತಿಯಿಂದ ತಾಲ್ಲೂಕು ಆಡಳಿತದ ಆದೇಶದನ್ವಯ ರದ್ದುಗೊಳಿಸಲಾಗಿದೆ ಎಂದು ತಹಶೀಲ್ದಾರ್ ಜಿ.ಎಸ್. ಶಂಕರ್ ಹೇಳಿದರು. ತಾಲ್ಲೂಕಿನ ಸುಕ್ಷೇತ್ರ ಮೆಡ್ಲೇರಿ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಠಾಣೆ ಸಿಪಿಐ ಶ್ರೀಶೈಲ ಚೌಗಲಾ ಮಾತನಾಡಿದರು. ಉಪತಹಶೀಲ್ದಾರ್ ಶ್ಯಾಮ ಗೊರವರ, ಪಿಡಿಒ ಶೇಖಪ್ಪ ಪೂಜಾರ ಹಾಗೂ ಗ್ರಾಮಸ್ಥರು ಇದ್ದರು.
January 13, 2025