ದಾವಣಗೆರೆ, ಆ.5- ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಮಹಾನಗರ ಪಾಲಿಕೆಯಲ್ಲಿ ನೀರುಗಂಟಿಗಳಾಗಿ ಒಂದು ದಿನವೂ ತಪ್ಪದೇ ತಮ್ಮ ಕಾರ್ಯ ನಿರ್ವಹಿಸಿದ ಸುಮಾರು 20 ಜನರಿಗೆ ಫುಡ್ ಕಿಟ್ ಗಳನ್ನು ನಗರದ ಹೆಸರಾಂತ ಸ್ತ್ರಿ ರೋಗ ತಜ್ಞೆ ಡಾ. ಗಾಯತ್ರಿ ಪಾಟೀಲ್ ವಿತರಿಸಿದರು. ಸುಮಾರು 100 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಯುವ ಮುಖಂಡ ಶಂಭು ಉರೇಕೊಂಡಿ ಅವರು ಕಿಟ್ ಗಳನ್ನು ತಯಾರಿಸಿ,ಶ ಅವರ ಮನೆ ಬಾಗಿಲಿಗೆ ತಲುಪಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ವೀಣಾ ಶಂಭು, ಮಧು ಕುಂದವಾಡ, ಶ್ರೀಮತಿ ದಿವ್ಯ ಕಾಕರ್ಲ ಮತ್ತಿತರರು ಉಪಸ್ಥಿತರಿದ್ದರು.
January 12, 2025