ದಾವಣಗೆರೆ, ಮಾ. 24- ಇಲ್ಲಿನ ವಿದ್ಯಾನಗರದ ಮುಖ್ಯ ರಸ್ತೆಯಲ್ಲಿರುವ ಆರೇಂಜ್ ಕಾರ್ ಕೇರ್-ಅಧಿಕೃತ ಬ್ರಿಡ್ಜ್ ಸ್ಟೋನ್ ಟೈರ್ ಮಾರಾಟಗಾರರ ವತಿಯಿಂದ ದಾವಣಗೆರೆಯ ನೂತನ ಮಹಾಪೌರ ಎಸ್.ಟಿ ವೀರೇಶ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಇದೇ ವೇಳೆ ಉಚಿತ ನೋಟ್ ಬುಕ್ಗಳನ್ನು ಆರೇಂಜ್ ಕಾರ್ ಕೇರ್ ವತಿಯಿಂದ ವಿತರಿಸಲು ಮೇಯರ್ ಅವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ವೀರೇಶ್ ಬಾಡ, ಸುಪ್ರೀತ್, ಪ್ರಭುದೇವ್ ಹಾಗೂ ಶಿವರಾಜ್ ಕಬ್ಬೂರು, ಸಂತೋಷ್ ಮತ್ತು ಆರೇಂಜ್ ಕಾರ್ ಕೇರ್ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
January 25, 2025