ಹರಪನಹಳ್ಳಿ, ಆ.5- ತಾಲ್ಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುರೇಮಾಗಾನಹಳ್ಳಿ ಕೆರೆ ಇತ್ತೀಚೆಗೆ ಸುರಿದ ಭಾರೀ ಮಳೆಗೆ ತುಂಬಿದ್ದು, ಕೆರೆ ಏರಿ ಬಿರುಕು ಬಿಟ್ಟಿದೆ. ಮುಂಜಾಗ್ರತೆ ಕ್ರಮವಾಗಿ ಶಾಸಕ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಎಸ್.ವಿ. ರಾಮಚಂದ್ರಪ್ಪ ಅವರ ಆದೇಶದಂತೆ ಬಿರುಕು ಬಿಟ್ಟಿದ್ದ ಕೆರೆ ಏರಿಯನ್ನು ಇಲಾಖೆಯಿಂದ ದುರಸ್ತಿಗೊಳಿಸಲಾಯಿತು. ಈ ವೇಳೆ ಯುವ ಮುಖಂಡ ಫಣಿಯಾಪುರ ಲಿಂಗರಾಜ್ ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು ಹಾಜರಿದ್ದರು.
February 24, 2025