ದಾವಣಗೆರೆ, ಜೂ. 27- ಜೈನ್ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗ, ರಾಷ್ಟ್ರೀಯ ಸೇವಾ ಸಮಿತಿ ಹಾಗೂ ಉನ್ನತ ಭಾರತ ಅಭಿಯಾನ ಅಡಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಯೋಗ ಶಿಕ್ಷಕರಾದ ಶ್ರೀಮತಿ ಬಿ.ಎಸ್. ಪ್ರತಿಮಾ, ಕಾಲೇಜಿನ ಪ್ರಾಂಶುಪಾಲ ಡಾ|| ಡಿ.ಬಿ. ಗಣೇಶ್,
ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ|| ರಜನೀಶ್ ಎನ್. ಮರಿಗೌಡರ್ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಕೆ.ಎಸ್. ವೀರೇಶ್ ಕುಮಾರ್, ಕೆ.ಜಿ. ಅಭಿಷೇಕ್, ಬಿ.ಹೆಚ್. ಶಿವಯೋಗಿ, ಎಂ.ಹೆಚ್. ಬಸವರಾಜ್ ಉಪಸ್ಥಿತರಿದ್ದರು.