ರಾಣೇಬೆನ್ನೂರಿನಲ್ಲಿ ಕ್ಷಯರೋಗ ಜಾಗೃತಿ ಕಾರ್ಯಕ್ರಮ

ರಾಣೆಬೆನ್ನೂರು, ಮಾ.22- ಕ್ಷಯರೋಗದ ಬಗ್ಗೆ ಪ್ರತಿಯೊಬ್ಬರು ಜಾಗ್ರತೆ  ವಹಿಸುವುದು ಅವಶ್ಯಕವಾಗಿದೆ ಎಂದು ಇಲ್ಲಿನ ಹೊಸನಗರದ ಗುಡ್ ಶೆಫರ್ಡ್ ಚರ್ಚ್‌ನ ರೆವರೆಂಡ್ ಕ್ರಿಸ್ತಾನಂದ ಕೊಳಚಿ ಹೇಳಿದರು.

ಹೊಸ ನಗರದಲ್ಲಿರುವ ಗುಡ್ ಶೆಫರ್ಡ್ ಚರ್ಚ್‌ನಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಕ್ಷಯರೋಗ ಕುರಿತ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಮೇಲ್ವಿಚಾರಕ ಜಗದೀಶ್ ಪಾಟೀಲ ಮಾತನಾಡಿ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯರೋಗಕ್ಕೆ ಪರೀಕ್ಷೆ ಹಾಗೂ ಚಿಕಿತ್ಸೆ ಉಚಿತವಾಗಿದೆ. ಭಯಪಡದೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ನಗರ ಕ್ಷಯರೋಗ ಆರೋಗ್ಯ ಸಂದರ್ಶಕ ಗಿರೀಶ್ ಮುರನಾಳ ಮಾತನಾಡಿ, ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ಸೇವನೆಗಾಗಿ ಅವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 500 ರೂ. ಜಮಾ ಮಾಡಲಾಗುವುದು ಎಂದರು. ರೆವರೆಂಡ್ ರಾಜು ಮದಗೊಪ್ಪ, ಜಯಮಾಲಾ, ಸುಂದರಮ್ಮ, ಪುನೀತ, ವಿವೇಕ, ರತ್ನಾಕರ ಉಪಸ್ಥಿತರಿದ್ದರು.

error: Content is protected !!