ದಾವಣಗೆರೆ, ಮಾ.23- ವಾರ್ಡ್ ನಂ.6 ರಲ್ಲಿ ಮಹಾನಗರ ಪಾಲಿಕೆಯಿಂದ 1ನೇ ಮುಖ್ಯ ರಸ್ತೆಯಲ್ಲಿ ಬರುವ ಸಾಯಿಬಾಬಾ ಮಂದಿರದ ಹಿಂಭಾಗದಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣೆಪ್ಪ ನೆರವೇರಿಸಿದರು.
ಈ ಸಾಲಿನ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಮಂಜೂರಾಗಿರುವ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲಿಕೆ ಸಹಾಯಕ ಅಭಿಯಂತರ ಅನುಪ್, ಜೆ.ಇ. ರಾಮಚಂದ್ರಪ್ಪ, ವಾರ್ಡಿನ ಪ್ರಮುಖರಾದ ಲಿಂಗೋಜಿರಾವ್, ನಂಜುಂಡಪ್ಪ, ಹನುಮಂತಪ್ಪ, ಜಿ. ಬಸವರಾಜ್, ಗುತ್ತಿಗೆದಾರರಾದ ಜಿ. ತಿಪ್ಪೇಸ್ವಾಮಿ, ಟಿ. ಶಿವಕುಮಾರ್ ಸೇರಿದಂತೆ ವಾರ್ಡಿನ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.