ದಾವಣಗೆರೆ, ಮಾ. 23- ನಗರದ ಬಾಪೂಜಿ ಶಾಲೆಯಲ್ಲಿ ರಾಜ್ಯಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರವನ್ನು ಮೊನ್ನೆ ನಡೆಸಲಾಯಿತು.
ಗೈಡ್ ವಿಭಾಗದ ನಾಯಕಿಯಾಗಿ ಕಾತ್ಯಾಯಿನಿ ಎಎಲ್ಟಿ ಗೈಡ್, ಸ್ಕೌಟ್ ವಿಭಾಗದ ನಾಯಕನಾಗಿ ಶಿವಶಂಕರ್ ಎಎಲ್ಟಿ ಸ್ಕೌಟ್ ಕಾರ್ಯ ನಿರ್ವಹಿಸಿದರು. ಜಿಲ್ಲಾ ಮುಖ್ಯ ಆಯುಕ್ತರಾದ ಮುರುಘರಾಜೇಂದ್ರ ಜೆ.ಚಿಗಟೇರಿ, ಜಿಲ್ಲಾ ಸ್ಕೌಟ್ ಆಯುಕ್ತರಾದ ಎ.ಪಿ.ಷಡಾಕ್ಷರಪ್ಪ ಹಾಗೂ ಜಿಲ್ಲಾ ಕಾರ್ಯದರ್ಶಿ ರತ್ನ, ಜಿಲ್ಲಾ ಖಜಾಂಚಿ ಬಿ.ವಿ ವಿಶ್ವನಾಥ್ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಜಂಟಿ ಕಾರ್ಯದರ್ಶಿ ಸುಖವಾಣಿ ಕ್ವಾಟರ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದರು. ಅಶ್ವಿನಿ ಪರೀಕ್ಷಾ ಶಿಬಿರವನ್ನು ಸಂಘಟಿಸಿದರು.