ದಾವಣಗೆರೆ, ಮಾ.22- ರಾಷ್ಟ್ರೀಯ ಹೆದ್ದಾರಿಯ ದಾವಣಗೆರೆ ವಿಭಾಗದ ಜಿಲ್ಲಾ ಪಂಚಾಯತ್ ಎದುರುಗಡೆ ಚನ್ನಗಿರಿ ಮಾರ್ಗವಾಗಿ ಹೋಗುವ ರಸ್ತೆಯ ನಾಮಫಲಕ ಕನ್ನಡದಲ್ಲಿ `ಚಿತ್ರದುರ್ಗ’ ಎಂದು, ಇಂಗ್ಲಿಷ್ನಲ್ಲಿ `ಚನ್ನಗಿರಿ’ (Channagiri) ಎಂದಿದೆ. ಪ್ರಯಾಣಿಕರ ದಿಕ್ಕು ತಪ್ಪಿಸುತ್ತಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಧಿನಿಯಮದ ಹೆದ್ದಾರಿ ಪ್ರಾಧಿಕಾರದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬದಲಾಯಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಆಗ್ರಹಿಸಿದ್ದಾರೆ.
December 28, 2024