ಹರಿಹರ, ಮಾ. 22- ಇಲ್ಲಿನ ಮರಿಯಾ ನಿವಾಸ ಪ್ರೌಢಶಾಲಾ ವತಿಯಿಂದ ಶಾಲಾ ಆವರಣದಲ್ಲಿ ತಾಲ್ಲೂಕು ಮಟ್ಟದ ತಾಲ್ಲೂಕಾ ದ್ವಿತಿಯ ಸೋಪಾನ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಕ್ಕಳಿಗೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರ ಬಗ್ಗೆ ಅರಿವು ಮೂಡಿಸಲು ನಿವೃತ್ತ ಚಿತ್ರಕಲಾ ಶಿಕ್ಷಕ ಡಾ|| ಜಿ.ಜೆ. ಮೆಹೆಂದಳೆ ಚಿತ್ರಿ ಸಿರುವ ರಾಷ್ಟ್ರ ದೇಶಭಕ್ತ ಹುತಾತ್ಮ ನಾಯಕರ ಭಾವಚಿತ್ರಗಳ ಪ್ರದರ್ಶನವನ್ನು ಹರಿಹ ರದ ಚಿಂತನ ಪ್ರತಿಷ್ಠಾನದಿಂದ ಆಯೋಜಿಸಲಾಗಿತ್ತು.
ಹರಿಹರ ಆರೋಗ್ಯ ಮಾತೆಯ ಚರ್ಚಿನ ಫಾದರ್ ಡಾ|| ಅಂಟೋನಿ ಪೀಟರ್ ಭಾವಚಿತ್ರಗಳ ಪ್ರದರ್ಶನ ಉದ್ಘಾಟಿಸಿದರು. ಚಿಂತನ ಪ್ರತಿಷ್ಠಾನದ ಸುಬ್ರಹ್ಮಣ್ಯ ನಾಡಿಗೇರ್, ಡಾ|| ಡಿ. ಫ್ರಾನ್ಸಿಸ್, ಚಿತ್ರಕಲಾವಿದ ಡಾ|| ಜಿ.ಜೆ. ಮೆಹೆಂದಳೆ, ಅಂಬೇಡ್ಕರ್ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಚ್. ಹಾಲಪ್ಪ, ತಾಲ್ಲೂಕು ಗೈಡ್ ಗೀತಾ ಡಿ.ಪಿ, ತಾಲ್ಲೂಕು ಕಾರ್ಯದರ್ಶಿ ರುದ್ರೇಶ್ ಹಾಗೂ ತಾಲ್ಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.