ಹರಿಹರ, ಮಾ.22- ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಹರಿಹರ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿ 4×400 ರಿಲೇಯಲ್ಲಿ ದ್ವಿತೀಯ, 1500 ಮೀಟರ್ ಓಟದಲ್ಲಿ ದ್ವಿತೀಯ, 3000 ಮೀಟರ್ ಓಟದಲ್ಲಿ ಪ್ರಥಮ, ವಾಕ್ ರೇಸ್ ನಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಎ.ಜೆ. ಅಂಬಿಕಾ, ಪಿ.ಎಚ್. ಪ್ರಿಯಾಂಕ, ಎ.ಎಂ. ರಕ್ಷಿತಾ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಪಟುಗಳಿಗೆ ಕಾಲೇಜಿನ ಪ್ರಾಚಾರ್ಯೆ ಆರ್. ಶೀಲಾ ಹಾಗೂ ಕಾಲೇಜು ಉಪನ್ಯಾಸಕರು-ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
February 24, 2025