ತೂ.ಕ. ಶಂಕರಯ್ಯ ಸಲಹೆ
ದಾವಣಗೆರೆ, ಮಾ. 22 – ಇಲ್ಲದುದರ ಬಗ್ಗೆ ಯೋಚನೆ ಮಾಡದೆ ಇರುವುದನ್ನೇ ಸರಿಯಾಗಿ ಬಳಸಿಕೊಂಡು ಅಭ್ಯಾಸ ಮಾಡಿದರೆ ಪದವಿ ಶಿಕ್ಷಣದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ಪ್ರಾಂಶುಪಾಲ ತೂ.ಕ. ಶಂಕರಯ್ಯ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಐಕ್ಯುಎಸಿ ಸಂಚಾಲಕ ಪ್ರೊ. ವೀರೇಶ್, ಡಾ ಮಂಜುನಾಥ್, ಆಳ್ವಾಸ್ ಮ್ಯಾನೇಜ್‌ಮೆಂಟ್ ಸ್ಟಡೀಸ್˝ನ ಗುರುಪ್ರಸಾದ್, ಪ್ರೊ. ಮರುಳಸಿದ್ಧಪ್ಪ , ಜಯಣ್ಣ, ಪ್ರೊ. ರಾಜಮೋಹನ್, ಚನ್ನಬಸಪ್ಪ, ಡಾ. ಶ್ಯಾಮಲಾ ಉಪಸ್ಥಿತರಿದ್ದರು. ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರೊ. ಅಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮಿ ಪ್ರಾರ್ಥಿಸಿದರು. ಸ್ವಪ್ನಾ ಸ್ವಾಗತಿಸಿದರು. ಪ್ರೊ. ಬಾಬು ವಂದಿಸಿದರು.