ದಾವಣಗೆರೆ, ಮಾ.22- ಶ್ರೀ ದುರ್ಗಾಂಬಿಕಾ ಮಹಿಳಾ ಸಂಸ್ಥೆಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗ ಳಾಗಿ ಮೀನುಗಾರಿಕೆ ಉಪನಿರ್ದೇಶಕ ಡಾ. ಉಮೇಶ್ ಮತ್ತು ಆರೋಗ್ಯಾಧಿಕಾರಿ ಪ್ರಭು, ವಿನೂತನ ಮಹಿಳಾ ಸಮಾಜದ ಮಾಜಿ ಅಧ್ಯಕ್ಷರು, ದುರ್ಗಾಂಬಿಕಾ ಮಹಿಳಾ ಸಂಸ್ಥೆಯ ಮಂಜುಳ ಗುರುಸ್ವಾಮಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಗೀತಾ ನಾಗರಾಜ್, ಖಜಾಂಚಿ ಗಾಯತ್ರಿ ನಾಗರಾಜ್, ನಿರ್ದೇಶಕರಾದ ನಾಗಮಣಿ, ಹೇಮ, ಲಕ್ಷ್ಮಿ ಗುರುನಾಥ್, ಲತಾ, ಶ್ವೇತಾ, ಕವಿತಾ ಹಾಜರಿದ್ದರು.
February 24, 2025