ಹೊನ್ನಾಳಿ, ಮಾ.22- ತಾಲ್ಲೂಕಿನ ಎಚ್. ಗೋಪಗೊಂಡನಹಳ್ಳಿ ತಾಂಡಾವನ್ನು ಕಂದಾಯ ಗ್ರಾಮಗಳ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಎಚ್. ಗೋಪಗೊಂಡನಹಳ್ಳಿ ಗ್ರಾಪಂ ಸದಸ್ಯ ಬಿ. ಸುರೇಶ್ನಾಯ್ಕ ತಹಸೀಲ್ದಾರ್ ಬಸನಗೌಡ ಕೋಟೂರ ಅವರಿಗೆ ವಿನಂತಿಸಿದರು.
ಸೋಮವಾರ ತಾಲ್ಲೂಕು ಕಚೇರಿಯಲ್ಲಿ ರೈತ ಕಡದಕಟ್ಟೆ ಎಂ.ಎಸ್. ಜಗದೀಶ್ ಅವರ ನೇತೃತ್ವದಲ್ಲಿ ತಹಸೀಲ್ದಾರ್ ಬಸನಗೌಡ ಕೋಟೂರ ಅವರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ಎಚ್. ಗೋಪಗೊಂಡನಹಳ್ಳಿ ತಾಂಡಾದಲ್ಲಿ 250 ಮನೆಗಳಿದ್ದು, 2 ಸಾವಿರ ಜನಸಂಖ್ಯೆ ಇದೆ. ಸುಮಾರು 75 ಕುಟುಂಬಗಳಿಗೆ ಕಂದಾಯ ಜಮೀನು ಇದೆ. ಹಾಗಾಗಿ, ಪ್ರಸ್ತಾವಿತ ಹೊಸ ಕಂದಾಯ ಗ್ರಾಮಗಳ ಪಟ್ಟಿಗೆ ಎಚ್. ಗೋಪಗೊಂಡನಹಳ್ಳಿ ತಾಂಡಾವನ್ನು ಸೇರ್ಪಡೆ ಮಾಡಬೇಕು ಎಂದು ಮನವಿ ಮಾಡಿದರು. ಎಂ.ಎಸ್. ಜಗದೀಶ್, ರಾಮಚಂದ್ರನಾಯ್ಕ, ಕುಬೇರನಾಯ್ಕ, ಪಿ. ಪ್ರಕಾಶ್ನಾಯ್ಕ, ಬಿ. ರವಿನಾಯ್ಕ, ಅಣ್ಣಪ್ಪನಾಯ್ಕ ಮತ್ತಿತರರು ಉಪಸ್ಥಿತರಿದ್ದರು.