ದಾವಣಗರೆ, ಮಾ. 21- ಮಾಯಕೊಂಡದ ಶ್ರೀ ಕಾಶಿ ವಿಶ್ವನಾಥೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಶಿವ ಸಹಸ್ರನಾಮ, ರುದ್ರಹೋಮ, ರುದ್ರ ಕವಚನ, ಪಂಚಾಮೃತ ಅಭಿಷೇಕ ನಡೆಸಲಾಯಿತು. ಮುಖ್ಯ ಧರ್ಮದರ್ಶಿ ಎಂ.ಎಸ್.ಕೆ. ಶಾಸ್ತ್ರಿ, ಎಂ.ಎಸ್.ಕೆ. ಸುಬ್ರಹ್ಮಣ್ಯಶಾಸ್ತ್ರಿ, ಎ.ಹೆಚ್. ಅರುಣಾಚಲ ಶಾಸ್ತ್ರಿ, ಎಂ.ಎಸ್.ಜೆ. ಹರೀಶ್ ಶಾಸ್ತ್ರಿ, ಸ್ಕಂದ ಪ್ರಸಾದ್, ಮತ್ತಿತತರು ಉಪಸ್ಥಿತರಿದ್ದು ಶಿವರಾತ್ರಿ ಆಚರಣೆ ನಡೆಸಿದರು.
January 10, 2025