ರಾಣೇ ಬೆನ್ನೂರು, ಮಾ.18- ಸುಕ್ಷೇತ್ರ ಗಂಗಾಪುರ ದಲ್ಲಿ ನಡೆದ ಜಾತ್ರಾ ಮಹೋತ್ಸವ ಕಾರ್ಯಕ್ರ ಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಹಾವೇರಿ ವತಿಯಿಂದ ಕ್ಷಯರೋಗ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹದಡಿ ಶ್ರೀ ಸದ್ಗುರು ಮುರಳೀಧರ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, 2025 ರ ವೇಳೆಗೆ ಭಾರತವನ್ನು ಕ್ಷಯ ಮುಕ್ತ ದೇಶವನ್ನಾಗಿ ಮಾಡಬೇಕಾಗಿದೆ ಹಾಗೂ ರೋಗವನ್ನು ಸೋಲಿಸಿ, ದೇಶವನ್ನು ಗೆಲ್ಲಿಸೋಣ ಎಂದು ಕರೆ ನೀಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಕ್ಕೆ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಜಾಗೃತಿ ಮೂಡಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಹಾವೇರಿಯ ಮೇಲ್ವಿಚಾರಕ ಜಗದೀಶ್ ಪಾಟೀಲ್ ಮಾತನಾಡಿ, ರೋಗದ ಲಕ್ಷಣಗಳ ಕುರಿತು ತಿಳಿಸಿದರು. ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ, ಪರೀಕ್ಷೆಗೊಳಪಡುವಂತೆ ಜಾಗೃತಿ ಮೂಡಿಸಿದರು. ಗಂಗಾಪುರ ಶ್ರೀ ಸದ್ಗುರು ಮರುಳಶಂಕರ ಸ್ವಾಮಿಗಳು ಜಗದೀಶ್ ಪಾಟೀಲರನ್ನು ಸನ್ಮಾನಿಸಿದರು. ಗಿರೀಶ್ ಮುರನಾಳ, ಸನಾವುಲ್ಲಾ, ತಂಬಾಕದ ಉಪಸ್ಥಿತರಿದ್ದರು.