ಮಲೇಬೆನ್ನೂರು, ಮಾ.16- ಪಟ್ಟಣದ ಶ್ರೀ ಬಸವೇಶ್ವರ ದೇವರ ರಥೋ ತ್ಸವವು ನಾಡಿದ್ದು ದಿನಾಂಕ 18ರ ಗುರುವಾರ ಸಂಜೆ 4.30 ಕ್ಕೆ ಜರುಗಲಿದೆ.
ರಥೋತ್ಸವದ ಅಂಗವಾಗಿ ಮಂಗಳವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ದೇವರ ಸಣ್ಣ ಉತ್ಸವ ಜರುಗಿತು. ನಾಳೆ ದಿನಾಂಕ 17 ರ ಬುಧವಾರ ಬೆಳಿಗ್ಗೆ ವಿವಿಧ ಪೂಜೆಗಳ ನಂತರ ಸಣ್ಣ ಉತ್ಸವ ನಡೆಯಲಿದ್ದು, ರಾತ್ರಿ 9 ಕ್ಕೆ ಮಹಾರಥಕ್ಕೆ ಕಳಸಾರೋಹಣ ಮಾಡಲಾಗುವುದು.
ದಿನಾಂಕ 18 ರ ಗುರುವಾರ ಬೆಳಿಗ್ಗೆ 8 ಕ್ಕೆ ಸಣ್ಣ ಉತ್ಸವ, 9 ಗಂಟೆಗೆ ರಥಕ್ಕೆ ತೈಲಾಭಿಷೇಕ, ಮಧ್ಯಾಹ್ನ 12 ರಿಂದ ದೇವಸ್ಥಾನದಲ್ಲಿ ಶ್ರೀಮತಿ ದೇವೀರಮ್ಮ ಸ್ಮರಣಾರ್ಥ ದಾಸೋಹ ಏರ್ಪಡಿಸಲಾಗಿದೆ. ಸಂಜೆ 4.30 ಕ್ಕೆ ಶ್ರೀ ಬೀರಲಿಂಗೇಶ್ವರ ಕಾರಣಿಕೋತ್ಸವ ನಡೆಯಲಿದೆ. ನಂತರ ಊರ ದೇವರುಗಳ ಸಮ್ಮುಖದಲ್ಲಿ ಶ್ರೀ ಬಸವೇಶ್ವರ ದೇವರ ಮಹಾ ರಥೋತ್ಸವ ಜರುಗುವುದು.