ಮಲೇಬೆನ್ನೂರು, ಮಾ.16- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಶಿವರಾತ್ರಿ ಜಾತ್ರಾ ಮಹೋ ತ್ಸವದ ಅಂಗವಾಗಿ ಬಯಲು ಜಂಗೀ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳ ಲಾಗಿತ್ತು. ರಾಜ್ಯ ಅಷ್ಟೇ ಅಲ್ಲದೆ, ಹೊರ ರಾಜ್ಯಗಳಿಂದಲೂ ಕುಸ್ತಿ ಪಟುಗಳು ಆಗಮಿಸಿದ್ದು, ಗೆಲುವಿಗಾಗಿ ಜಟ್ಟಿಗಳು ಸೆಣಸಾಟ ನಡೆಸಿದರು. ಬುಧವಾರ ಅಂತಿಮ ಹಂತದ ಕುಸ್ತಿಗಳು ಎಲ್ಲರ ಗಮನ ಸೆಳೆಯಲಿವೆ.
ಹರಕೆ : ಅಜ್ಜಯ್ಯನ ದೇವಸ್ಥಾನದಲ್ಲಿ 2 ದಿನ ಭಕ್ತರಿಂದ ವಿವಿಧ ಹರಕೆ ಸೇವೆಗಳು ನಡೆದವು.