ಪೋಷಕರ ಮಡಿಲು ಸೇರಿಸಿದ 112 ತುರ್ತು ಪೊಲೀಸರು
ದಾವಣಗೆರೆ, ಆ.1- ಪೋಷಕರೊಂದಿಗೆ ಜಗಳ ಮಾಡಿ ಕೊಂಡು ಮನೆ ಬಿಟ್ಟು ರಸ್ತೆಯಲ್ಲಿ ನಡೆದಾಡುತ್ತಿದ್ದ ಯುವತಿ ಯೋರ್ವಳನ್ನು ರಕ್ಷಿಸಿ ಪೋಷಕರ ಮಡಿಲಿಗೆ ಸೇರಿಸುವ ಮುಖೇನ ಇಲ್ಲಿನ 112ರ ತುರ್ತು ವಾಹನದ ಪೊಲೀಸರು ಸಾ ಮಾಜಿಕ ಜವಾಬ್ದಾರಿ ಮೆರೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ-4ರ ಕಲ್ಪನಹಳ್ಳಿ ಬಳಿ ರಸ್ತೆಯಲ್ಲಿ ಯುವತಿ ಬಗ್ಗೆ ಸ್ಥಳೀಯರು ಕರೆ ಮಾಡಿ ವಿಚಾರ ತಿಳಿಸಿದ ತಕ್ಷಣವೇ ಘಟನಾ ಸ್ಥಳಕ್ಕಾಗಮಿಸಿದ 112 ತುರ್ತು ಪೊಲೀಸರು, ಆ ಯುವತಿಯನ್ನು ರಕ್ಷಿಸಿದ್ದಾರೆ. ಯುವತಿಯಿಂದ ಮಾಹಿತಿ ಪಡೆದ ಪೊಲೀಸರು, ಆಕೆಯ ಪೋಷಕರನ್ನು ಕರೆಸಿ ಇಬ್ಬರಿಗೂ ತಿಳುವಳಿಕೆ ಹೇಳಿ ಜಗಳ ಮಾಡದಂತೆ ಸೂಚನೆ ನೀಡಿದರಲ್ಲದೇ, ಪುನಃ ಮನೆ ಬಿಟ್ಟು ಬಾರದಂತೆ ಯುವತಿಗೆ ತಿಳಿಸಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.