ಮಲೇಬೆನ್ನೂರು, ಮಾ.13- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಜಾತ್ರೆ ಒಂದು ವಾರ ಕಾಲ ಜರುಗಲಿದ್ದು, 2 ನೇ ಹಂತದ ಕೊರೊನಾ ಪ್ರಾರಂಭವಾಗು ತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಯವರು ಹೆಚ್ಚಿನ ನಿಗಾ ವಹಿಸಿದ್ದಾರೆ.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಟಿಹೆಚ್‌ಒ ಡಾ. ಚಂದ್ರಮೋಹನ್, ವೈದ್ಯಾಧಿ ಕಾರಿ ಡಾ. ನವೀನ್, ಹಿರಿಯ ಆರೋಗ್ಯ ಸಹಾಯಕ ಎಂ. ಉಮಣ್ಣ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ದಾಸೋಹ ಭವನ, ಅಡುಗೆ ಮನೆಯ ಸ್ವಚ್ಛತೆ ಪರಿಶೀಲಿಸಿದರು. ಎಲ್ಲಾ ಹೋಟೆಲ್, ತಿಂಡಿ ಅಂಗಡಿಗಳಿಗೆ ತೆರಳಿ ಸ್ವಚ್ಛತೆಯ ಜೊತೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹಾಗೂ ಗ್ರಾಹಕರಿಗೆ ಸ್ಯಾನಿಟೈಸರ್ ನೀಡುವಂತೆ ಸೂಚಿಸಿದರು.
ಜಾತ್ರೆಗೆ ಹೊರ ರಾಜ್ಯಗಳಿಂದ ಆಗಮಿಸಿದ ಹಾಗೂ ಅನಾರೋಗ್ಯ ಲಕ್ಷಣ ಹೊಂದಿರುವ ವ್ಯಕ್ತಿಗಳನ್ನು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಲು 2 ಮೊಬೈಲ್ ಟೆಸ್ಟಿಂಗ್ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಕುಡಿಯುವ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಗ್ರಾ.ಪಂ. ಕಾರ್ಯದರ್ಶಿ ಮಹೇಶ್ವರಪ್ಪ, ಆಹಾರ ಸಂರಕ್ಷಣಾಧಿಕಾರಿ ಕೊಟ್ರೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಾಟೀಲ್ ಇನ್ನಿತರರು ಹಾಜರಿದ್ದರು.