ಪಾಲಿಕೆಯ ಮಹಾಪೌರ ಎಸ್.ಟಿ. ವೀರೇಶ್‌ರಿಂದ ನರ್ಸರಿ ವೀಕ್ಷಣೆ

ದಾವಣಗೆರೆ, ಮಾ.14- ಪಾಲಿಕೆ ಮತ್ತು ಅರಣ್ಯ ಇಲಾಖೆ ಯಿಂದ ಸಂಯೋಜಿತಗೊಂಡಿರುವ ಮರ, ಗಿಡ ನೆಡುವ ಕಾರ್ಯ ಕ್ರಮಕ್ಕೆ ನರ್ಸರಿಯಲ್ಲಿ ಬೆಳೆಸುತ್ತಿರುವ ಸಸಿಗಳ ವೀಕ್ಷಣೆ ಮಾಡಲಾಯಿತು. ಈ ಸಮಯದಲ್ಲಿ ಮಹಾನಗರಪಾಲಿಕೆಯ ಮಹಾಪೌರ ಎಸ್.ಟಿ. ವೀರೇಶ್ ಮತ್ತು ಮಾಜಿ ಮಹಾಪೌರರು ಹಾಗೂ ಹಾಲಿ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾ ಪ್ರಕಾಶ್‌ ಹಾಗೂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾದ ರೇಣುಕಾ ಶ್ರೀನಿವಾಸ್, ಉಪ ಮಹಾಪೌರರಾದ ಸೌಮ್ಯ ನರೇಂದ್ರಕುಮಾರ್‌, ಪಾಲಿಕೆ ಸದಸ್ಯರಾದ ಗಾಯತ್ರಿ ಬಾಯಿ ಉಪಸ್ಥಿತರಿದ್ದರು.

error: Content is protected !!