ದಾವಣಗೆರೆ, ಮಾ.12- ವಿನೋಬ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯ ಮೇಲ್ಛಾವಣಿ ಶಿಥಿಲಗೊಂಡಿದ್ದು, ಅದು ಬಿದ್ದು ಅನಾಹುತ ಆಗುವ ಮೊದಲೇ ಶಾಲಾ ಕೊಠಡಿಗಳನ್ನು ಹಾಗೂ ಕಾಂಪೌಂಡ್ ಗೋಡೆಗಳನ್ನು ಪುನರ್ನಿರ್ಮಾಣ ಮಾಡಿಕೊಡಬೇಕೆಂದು ಶಾಸಕ ಎಸ್.ಎ. ರವೀಂದ್ರನಾಥ್ ಅವರಿಗೆ ಶಾಲಾಭಿವೃದ್ಧಿ ಸಮಿತಿ ಮನವಿ ಮಾಡಿದೆ. ಈ ಹಿಂದೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರೂ ಸಹ ಸಮಸ್ಯೆಗೆ ಸ್ಪಂದಿಸಿರುವುದಿಲ್ಲ. ಕೂಡಲೇ ಶಾಸಕರು ತಮ್ಮ ವಿಶೇಷ ಅನುದಾನದಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪುನರ್ ನಿರ್ಮಾಣ ಮಾಡಿಕೊಡಬೇಕೆಂದು ಕೋರಿದ್ದಾರೆ.
January 9, 2025