ದಾವಣಗೆರೆ, ಮಾ.12- ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಇಂದು ಬಂಧಿಸಿರುವ ಇಲ್ಲಿನ ಸಿಇಎನ್ ಅಪರಾಧ ಪೊಲೀಸರು ಸುಮಾರು 2 ಲಕ್ಷದ 35 ಸಾವಿರ ಮೌಲ್ಯದ 5 ಕೆ.ಜಿ 778 ಗ್ರಾಂ ಗಾಂಜಾ ಮತ್ತು 800 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಭದ್ರಾವತಿ ತಾಲ್ಲೂಕು ಹೊಸಬುಳ್ಳಾಪುರ ಗ್ರಾಮದ ಸಿ.ಆರ್. ಅರವಿಂದನ್, ಭದ್ರಾವತಿ ನ್ಯೂ ಟೌನ್ ನ ಎ. ಅನಿಲ್ ಕುಮಾರ್ ಬಂಧಿತರು.
ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್ ಮಾರ್ಗದರ್ಶನದಲ್ಲಿ ಡಿಸಿಆರ್ ಬಿ ಘಟಕದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ್ ನೇತೃತ್ವದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಿ.ವಿ. ಗಿರೀಶ್, ಸಿಬ್ಬಂದಿಗಳಾದ ಪಿ. ನಾಗರಾಜ್, ಲೋಹಿತ್, ನಾಗರಾಜ್, ಮಲ್ಲಿಕಾರ್ಜುನ ಹಾದಿಮನಿ, ಕೊಟ್ರೇಶ್, ದ್ಯಾಮೇಶ್ ಒಳಗೊಂಡ ತಂಡವು ಹರಿಹರ ತಾಲ್ಲೂಕಿನ ಹರಿಹರ-ಶಿವಮೊಗ್ಗ ರಸ್ತೆಯ ಪಕ್ಕದ ಪಿಎಸ್ ಕೆ ಫಾರ್ಮ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದೆ. ಈ ಸಂಬಂಧ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.