ಸ್ನೇಹ ಮಹಿಳಾ ಬಳಗದಿಂದ ಮಹಿಳಾ ದಿನಾಚರಣೆ

ದಾವಣಗೆರೆ, ಮಾ. 12- ನಗರದ ಎಂ.ಸಿ.ಸಿ ‘ಬಿ’ ಬ್ಲಾಕ್  ಸ್ನೇಹ ಮಹಿಳಾ ಬಳಗದ ವತಿಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ  ಮಹಿಳೆಯರಿಗಾಗಿ ಸಂಧ್ಯಾರವರಿಂದ ಮೈ ಸೋಪು ತಯಾರಿಕೆಯ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. 

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಜಿ.ಡಿ.ರಾಘವನ್‌ ಕೋವಿಡ್ ಹಾಗೂ ಕೋವಿಡ್ ಲಸಿಕೆಯ ಬಗ್ಗೆ ಮಾಹಿತಿ ನೀಡಿದರು. ಸೇವಾ ಕಾರ್ಯಕ್ರಮವಾಗಿ ಬಡ ಹೆಣ್ಣು ಮಕ್ಕಳಿಗೆ ಚಾಪೆಗಳನ್ನು ವಿತರಿಸಲಾಯಿತು. 

ಸ್ನೇಹ ಮಹಿಳಾ ಬಳಗದ ಆಜೀವ ಅಧ್ಯಕ್ಷೆ ಮಂಜುಳ ನಿಂಗಪ್ಪ, ಗೌರವ ಅಧ್ಯಕ್ಷೆ ಮಂಜುಳ ಬಸವಲಿಂಗಪ್ಪ, ಅಧ್ಯಕ್ಷೆ ಶೋಭಾ ರವಿ, ಸುವರ್ಣಮ್ಮ ಉಪಸ್ಥಿತರಿದ್ದರು. 

error: Content is protected !!