ರಾಣೇಬೆನ್ನೂರು, ಜು.29- ರಾಜ್ಯ ಬಿಜೆಪಿ ನೇಕಾರ ಪ್ರಕೋಷ್ಠದ ವತಿಯಿಂದ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ನಿವೃತ್ತ ಯೋಧ ಜಯಪ್ರಕಾಶ್ ಅಂದಾನೆಪ್ಪ ಮೇಟಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಮಯದಲ್ಲಿ ರಾಜ್ಯ ನೇಕಾರ ಪ್ರಕೋಷ್ಠದ ಸಂಚಾಲಕ ಡಾ. ಬಸವರಾಜ ಕೇಲಗಾರ ಮಾತನಾಡಿ, ದೇಶದ ರಕ್ಷಣೆಗೆ ತಮ್ಮ ಪ್ರಾಣ ವನ್ನು ಲೆಕ್ಕಿಸದೇ ಹೋರಾಟ ಮಾಡಿದ್ದಾರೆ. ಅವರನ್ನು ಸನ್ಮಾನಿಸಿ, ಗೌರವಿಸುವ ಕೆಲಸ ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ ಎಂದರು. ಜಿಲ್ಲಾ ಸಂಚಾಲಕ ಶಿವಾನಂದ ಬಗಾದಿ, ತಾಲ್ಲೂಕು ಸಂಚಾಲಕ ಕಾಕಿ ರಾಮಣ್ಣ, ದ್ಯಾಮಣ್ಣ ಸುಂಕಾಪುರ, ವಿಶಾಲ್ ಗುಪ್ತಾ, ನಿವೃತ್ತ ಸೈನಿಕ ನಾಗೇಶ್ ತಳವಾರ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.