ಮಲೇಬೆನ್ನೂರು, ಜು.29- ಕಡಾರನಾಯ್ಕನಹಳ್ಳಿ ಗ್ರಾಮ ದಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳನ್ನು ಶಾಸಕ ಎಸ್. ರಾಮಪ್ಪ ವೀಕ್ಷಣೆ ಮಾಡಿ, ಪರಿಹಾರದ ಭರವಸೆ ನೀಡಿದರು.
ಮಳೆಯಿಂದ ತಾಲ್ಲೂಕಿನಲ್ಲಿ ಸುಮಾರು 30 ಕ್ಕೂ ಹೆಚ್ಚು ವಾಸದ ಮನೆಗಳಿಗೆ ಭಾಗಶಃ ಹಾನಿಯಾಗಿರುವ ಬಗ್ಗೆ ಮಾಹಿತಿ ಇದ್ದು, ಅವರಿಗೆ ತಕ್ಷಣ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆಂದು ಶಾಸಕರು ತಿಳಿಸಿದರು.
ಗ್ರಾಮದ ಗುಬ್ಬಿ ರಂಗನಾಥ್, ಹನುಮಂತಪ್ಪ, ಚಂದ್ರಪ್ಪ, ದೇವರಾಜ್, ಪಿಡಿಓ ಪರಮೇಶ್ವರಪ್ಪ, ಗ್ರಾಮ ಲೆಕ್ಕಾಧಿಕಾರಿ ಆನಂದತೀರ್ಥ ಮತ್ತಿತರರು ಈ ವೇಳೆ ಹಾಜರಿದ್ದರು.