ಹರಪನಹಳ್ಳಿ, ಮಾ.12- ತಾಲ್ಲೂಕಿನ ಬಾಲನಹಳ್ಳಿಯಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಂಜನೇಯಸ್ವಾಮಿ ರಥೋತ್ಸವ ಜರುಗಿತು.
ರಥೋತ್ಸವದಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮುಖಂಡರಾದ ಗೌಡ್ರು ಪರಶುರಾಮಪ್ಪ, ಜಿ. ಕೆಂಚನಗೌಡ್ರು, ಜಿ. ರಾಮನಗೌಡ್ರು, ಮುಖ್ಯ ಶಿಕ್ಷಕ ಎಸ್. ರೇವಣಸಿದ್ದಪ್ಪ, ತೌಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶೆಟ್ಟಿನಾಯ್ಕ, ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತ ರಕ್ಷಣಾ ಸಮಿತಿಯ ರಾಜ್ಯ ಅಧ್ಯಕ್ಷ ಎಚ್. ಕೊಟ್ರೇಶ್, ಗೌಡ್ರು ಶಿವಕುಮಾರ, ಗೌಡ್ರು ರವಿರಾಜ, ಪಿಡಿಒ ಮಾರುತಿ, ಯುವ ಮುಖಂಡ ಜಿಟ್ಟಿನಕಟ್ಟಿ ಹೆಚ್.ಕೆ. ಮಂಜುನಾಥ ಇನ್ನಿತರರು ಪಾಲ್ಗೊಂಡಿದ್ದರು.