ಹರಿಹರ, ಮಾ.10- ಕಾಶಿಯಿಂದ ಬಂದಂತಹ ಪವಿತ್ರ ಗಂಗಾಜಲವನ್ನು ಮುಜರಾಯಿ ದೇವಸ್ಥಾನ ಗಳಾದ ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಶ್ರೀ ಕಲ್ಲೇಶ್ವರ ದೇವಸ್ಥಾನ, ಏಕನಾಥೇಶ್ವರಿ ದೇವಸ್ಥಾನ ಸೇರಿದಂತೆ ಇತರೆ ದೇವಸ್ಥಾನಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪರೀಕ್ಷಾರ್ಥ ಉಪವಿಭಾಗಾಧಿಕಾರಿ ದುರ್ಗಾಶ್ರೀ, ಪರೀಕ್ಷಾರ್ಥ ತಹಶೀಲ್ದಾರ್ ಸಂಜನಾ ಹಾಗೂ ಕಚೇರಿ ಸಿಬ್ಬಂದಿಗಳಾದ ಭಾರತಿ, ಭೀಮೇಶ್, ಸೋಮಣ್ಣ, ಸೌಮ್ಯ ಸಂತೋಷ್, ಕಿರಣ್ ರಾಜಸ್ವ ನಿರೀಕ್ಷಕ ಸಮೀರ್, ಮುಜರಾಯಿ ವಿಷಯ ನಿರ್ವಾಹಕ ಸಂಗೀತ ಕೆ. ಜೋಶಿ ಉಪಸ್ಥಿತರಿದ್ದರು.
January 27, 2025