ಹರಿಹರ, ಮಾ.10- ನಗರದ ಪೊಲೀಸ್ ವೃತ್ತ ಕಚೇರಿಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಸವಿತಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ನರಸಿಂಹರಾಜು ತಾಮ್ರಧ್ವಜ, ಸಿಪಿಐ ಸತೀಶ್ ಕುಮಾರ್, ಮಲೇಬೆನ್ನೂರು ಠಾಣೆಯ ಪಿಎಸ್ಐ ವೀರಬಸಪ್ಪ ಕುಸಲಪೂರ್, ಬಿಳಿಚೋಡು ಪಿಎಸ್ಐ ಶೈಲಾಶ್ರೀ, ಎಎಸ್‌ಐ ಮಂಜುಳಾ, ಸಿಬ್ಬಂದಿಗಳಾದ ಸುಶೀಲಮ್ಮ, ಸುಜಾತ, ಪವಿತ್ರ ಸತೀಶ್ ಇನ್ನಿತರರಿದ್ದರು.