ದಾವಣಗೆರೆ, ಮೇ 9- ನಾಯಕ ಸಮಾಜದ ಹಿರಿಯ ಮುಖಂಡರು, ಕಾರ್ಮಿಕ ಮುಖಂಡರೂ ಆದ ಹೆಚ್.ಕೆ. ರಾಮಚಂದ್ರಪ್ಪ ಅವರ ನಿಧನಕ್ಕೆ ನಗರದ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಇಂದು ನಡೆದ ಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ.ವೀರಣ್ಣ, ಹೆಚ್.ಕೆ. ರಾಮಚಂದ್ರಪ್ಪ ಅವರು ನಾಯಕ ಸಮಾಜದ ಅಧ್ಯಕ್ಷರಾಗಿ, ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರಲ್ಲದೇ, ಕಾರ್ಮಿಕ ಚಳುವಳಿ ಮೂಲಕ ಬಡವರ ಪರ ಧ್ವನಿಯಾಗಿದ್ದರು ಎಂದು ಸ್ಮರಿಸಿದರು.
ನಾಯಕ ವಿದ್ಯಾರ್ಥಿ ನಿಲಯದ ನಿರ್ದೆಶಕರಾದ ಫಣಿಯಾಪುರ ಲಿಂಗರಾಜ್, ಶ್ಯಾಗಲೆ ಮಂಜುನಾಥ, ಮುಖಂಡರಾದ ಬೆಣ್ಣಿಹಳ್ಳಿ ತಿಪ್ಪೇಸ್ವಾಮಿ, ತಿಮ್ಮಯ್ಯ, ಚೇತನ್ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.