ದಾವಣಗೆರೆ, ಮಾ.10- ಕೊಪ್ಪಳದ ಹೈಬ್ರೀಡ್ ಸುದ್ದಿವಾಹಿನಿಯು ನಡೆಸಿದ ವಾರ್ಷಿಕ ಸಮಾರಂಭದಲ್ಲಿ ಹತ್ತನೇ ವಯಸ್ಸಿನ ಅಮೋಘ ಪವಾರ್ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಮಾಡಿರುವ ಸಾಧನೆಯನ್ನು ಗುರ್ತಿಸಿ ಕರುನಾಡ ಗಾನ ನಕ್ಷತ್ರ 2021- ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಾರ್ಯಕ್ರಮದಲ್ಲಿ ನಂದೀಪುರ ಮಠದ ಶ್ರೀ ಮಹೇಶ್ವರ ಸ್ವಾಮೀಜಿ, ಬಳ್ಳಾರಿಯ ಶ್ರೀ ಕಲ್ಯಾಣ ಸ್ವಾಮೀಜಿ, ಹಿರೇಮಠದ ಶ್ರೀ ಅಭಿನವ ಚರಂತೇಶ್ವರ ಸ್ವಾಮಿ, ಪತ್ರಕರ್ತ ಡಾ. ಬಿ.ಎನ್. ಹೊರಪೇಟೆ, ಕನ್ನಡ ಕೋಗಿಲೆ ಖ್ಯಾತಿಯ ಖಾಸಿಂ ಉಪಸ್ಥಿತರಿದ್ದರು.
ಪವಾರ್ ಸಾಧನೆಗೆ 17ನೇ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಅಜ್ಜನವರಾದ ಅಜ್ಜಪ್ಪ ಪವಾರ್, ಸಂಗೀತ ಗುರುಗಳಾದ ಆನಂದ ಆರ್. ಪಾಟೀಲ ಹಾಗೂ ಯೂರೋ ಸ್ಕೂಲ್ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.