ದಾವಣಗೆರೆ, ಮಾ. 9- ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಲೇಡಿ ಕಬ್ ಮಾಸ್ಟರ್, ಸ್ಕೌಟ್ ಮಾಸ್ಟರ್, ಪ್ಲಾಕ್ ಲೀಡರ್ಸ್ ಹಾಗೂ ಗೈಡ್ ಕ್ಯಾಪ್ಟನ್ಗಳೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಟೋಟ ಸ್ಪರ್ಧೆಗಳ ಮೂಲಕ ಆಚರಿಸಲಾಯಿತು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಜಸ್ಟಿನ್ ಡಿಸೌಜ, ಖಜಾಂಚಿಗಳಾದ ಶ್ರೀಮತಿ ರೇಖಾರಾಣಿ ಕೆ. ಎಸ್ ಹಾಗೂ ಶ್ರೀಮತಿ ಗಾಯತ್ರಿ ಚಿಮ್ಮಡ್ ರವರು ಹಾಜರಿದ್ದರು. ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಉಸ್ತುವಾರಿ ನೋಡಿಕೊಂಡರು.
January 8, 2025